ರಿಚರ್ಡ್ ಮಿಲ್ಹೌಸ್ ನಿಕ್ಸನ್ (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನದ ೩೭ನೇ ರಾಷ್ಟ್ರಪತಿಯಾಗಿದ್ದವರು. ವಿಯೆಟ್ನಾಂ ಯುದ್ಧ ಹಾಗೂ ರಷ್ಯಾ-ಚೀನಾ ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. ವಾಟರ್ಗೇಟ್ ಪ್ರಕರಣದಿಂದ ಇವರು ಪದವಿಯಿಂದ ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ ಅಮೇರಿಕ ದೇಶದ ಉಪ ರಾಷ್ಟ್ರಪತಿ ಕೂಡ ಆಗಿದ್ದರು.